ಹುಟ್ಟು ಹಬ್ಬಗಳಂದು ಹತ್ತಾರು ದೀಪಗಳನ್ನು ಊದಿ ಆಚರಿಸುವ ಮಂದಿಗೆ, ಅವೇ ಆ ಹತ್ತು ದೀಪಗಳು ಇತರ ಹತ್ತು ಮನೆಗಳಿಗೆ ಬೆಳಕು ನೀಡಬಲ್ಲವು ಎಂಬುದು ಏಕೆ ಹೊಳೆಯುವುದಿಲ್ಲ? ವಿಶ್ವಮಾನವರಾಗಿ ಹುಟ್ಟುವ ಎಲ್ಲ ಮಕ್ಕಳನ್ನೂ ಯಾಕೆ ಸಂಕುಚಿತರನ್ನಾಗಿ ಮಾಡಲಾಗುತ್ತಿದೆ? ಜಾತಿ ನಮೂದಿಸದಿದ್ದರೆ ಶಾಲೆಗೆ ಪ್ರವೇಶಾತಿ ಕ್ಲಿಷ್ಟ! ಹ್ಹ.. ಏನಾದವು ರಾಮರಾಜ್ಯ , ವಿಶ್ವಮಾನವ ಸಂದೇಶಗಳು? ಆ ಕನಸು ಕಂಡವರು ಮೋಜಿಗಾಗಿ ಕನಸು ಕಂಡರೆ? ಅಥವಾ ಎಲ್ಲರೂ ಅವರನ್ನೇ ಮೋಜಿನ "ವಸ್ತು"ಗಳನ್ನಾಗಿ ಕಾಣುತ್ತಿರುವರೆ? ಈ ಪ್ರಶ್ನೆಗಳಿಗೆ ಉತ್ತರ ಹುಡುಕಬೇಕೆಂದರೆ ಮೆದುಳಿಗೆ ಹುಳು ಬಿಟ್ಟ ಹಾಗೆಯೇ ಸೈ.ಏನ ಮಾಡ ಬಂದವರು ಏನ ಮಾಡ ಹೊರಟಿಹೆವು ನಾವು? ಅಲ್ಲಿ ಮಂದಿರ ಕಟ್ಟಿದರೆ ಇಲ್ಲಿ ಮಸೀದಿ! ನಮಗಿಂತ ಆ ಹಕ್ಕಿಗಳೇ ವಾಸಿ.. ಬೇಕೆಂದಾಗ ಮಸೀದಿ, ಬೇಸರಿಸಿದಾಗ ಮಂದಿರ. ಇದರಿಂದ ನಾವು ಕಲಿಯುವುದು ಏನೋ ಇದೆಯಲ್ಲವೇ? ಮಾನವ ಜನ್ಮ ದೊಡ್ಡದು..ಇಹಕಾಗಿ ಬಾಳದಿರಿ, ಹುಚ್ಚಪ್ಪಗಳಿರಾ..
ನಾನು ಬಿಟ್ಟುಕೊಂಡಿರೋ ಹುಳುವನ್ನು ತೆಗೆಯೋ ಪ್ರಯತ್ನ ಮಾಡ್ತಿದೀನಿ. ದಯವಿಟ್ಟು ಒಮ್ಮೆ ತಾವೂ ಈ ಹುಳುವನ್ನು ನಿಮ್ಮ ತಲೆಯೊಳಗೂ ಹಾಕ್ಕೊಳ್ಳಿ. ಉತ್ತರ ಗೊತ್ತಾದ ಮೇಲೆ ತೆಗೆದುಬಿಡಿ.ಉತ್ತರ ಸಿಕ್ಕರೆ ಹಂಚಿಕೊಳ್ಳಿ...
ಬರುವೆ ಮತ್ತೊಮ್ಮೆ!
i agree dat many ppl celebrate der day wit candles...der r many many jobs in villages..these ppl wont work der...in my village only we r only in search of workers,,dey wont agree 2 work even if u ask dem 2 work wit a payment dat s worth...
ReplyDelete