Thursday, May 17, 2012

ಮಣ್ಣ ಬಯಕೆಗೆ ಬಾನು ಭುವಿ ಕೂಡಿರಲು...ಸಿರಿಭುವಿಯು ಕರೆಯಲ್ಕೆ
ಕರಿಮೋಡ ಮಣಿದಿರಲ್
ಭರದಿ ಹಸುರೆದ್ದು ನೆಲ ನಲಿದಾಡಿದೆ|
ಉರಿಗಣ್ಣ ಶನಿಪಿತನು
ತೆರೆಮರೆಗೆ ಸರಿದಿರಲ್ 
ಗರಿಬಿಚ್ಚಿ ನುಲಿದಿಹುವು ನೆಮಲಿಗಳವು||

ಉಮೆರಮಣ ಶಿವ ತಾನು
ಸುಮಶರನ ಬಾಣಕ್ಕೆ
ಸಮವೀಯೆ ಹಣೆಗಣ್ಣ ತೆರೆದಂತೆಯೇ|
ಅಮದೃವಿನಭಿಷೇಕ
ವಮನುಭವಿಸೆ ಮನ ತಾ
ನು ಮುಗಿಲಿನಲಿ ಮಿಂಚುಗಳು ಕೋರೈಸಿವೆ||