Sunday, February 21, 2010

ವಿರಹಿ

ಕದ್ದಿಂಗಳ ಬಾನ
ದಿಟ್ಟಿಸುವಾಗ
ಶಶಿಯಂತೆ ಬಪ್ಪುದು...
ನಿನ್ನ ನೆನಪು.

ಕಣ್ಮಿಟುಕುಗಳೇ
ಕೋಟಿ ಚುಕ್ಕಿಗಳು..
ನಿನ್ನ ಸಲುಗೆಯಿಂದಲಿ
ಬಾನ್ದೇವಿ ಸೊಕ್ಕಿಹಳು!

ಖಗ ವಿಲಾಸವೇ
ಮಧುರ ಮಂದಹಾಸ..
ಕೋಲ್ಮಿಂಚ ಕಿರುನಗೆಯೇ
ಸೆಳೆದೆಳೆವ ಪಾಶ..

ನಮ್ಮೀರ್ವರ ನಡುವೆ
ಏತಕೀ ಗ್ರಹಣ?
ನಿನ್ನ ನೆನಪಿಲ್ಲದಿರೆ ನಾ ,
ಚಂದ್ರನಿರದ ಚಕೋರನಂತೆ
ಕಮಲವಿಲ್ಲದ ಕೆರೆಯಂತೆ..
ಸ್ವರ ಹೊರಡದ ವೀಣೆಯಂತೆ..
ಪ್ರಾಣ ತ್ರಾಣವಿರದ ಬರಿದೆ ದೇಹ ಮಾತ್ರ ನಾ!

8 comments:

  1. ಕಾತ್ರಿಕ್ ಶಬ್ದ ಪ್ರಯೋಗ ಮೆಚ್ಚುಗೆಯಾಯ್ತು...
    ಕಣ್ಮಿಟುಕುಗಳೇ
    ಕೋಟಿ ಚುಕ್ಕಿಗಳು..
    ನಿನ್ನ ಸಲುಗೆಯಿಂದಲಿ
    ಬಾನ್ದೇವಿ ಸೊಕ್ಕಿಹಳು!......ಹೂಂ..!! ಬಾನ್ದೇವಿ ಸೊಕ್ಕಿಹಳು....ಸಲುಗೆಕೊಟ್ಟು ಸೊಕ್ಕಿಸುವ ಶಕ್ತಿ...ಅದೂ ಬಾನನ್ನು ಎನ್ನುವುದು ಕಲ್ಪನೆಯ ಇನ್ನೊಂದು ಆಯಾಮವಾಯಿತು...ಮುಂದುವರೆಸಿ...

    ReplyDelete
  2. ನಿನ್ನ ನೆನಪಿಲ್ಲದಿರೆ ನಾ ,
    ಚಂದ್ರನಿರದ ಚಾರ್ವಾಕನಂತೆ
    nice lines..

    ReplyDelete
  3. ಜಲನಯನರಿಗೆ ಧನ್ಯವಾದಗಳು! ವಿಜಯಶ್ರೀ ಅವರಿಗೂ ಧನ್ಯವಾದಗಳು.. ಬೆನ್ನು ತಟ್ಟಲು ನಿಮ್ಮ ಕೈ ಸೋಲದಿದ್ದರೆ, ಬರೆಯಲು ನಮ್ಮ ಕೈ ಕೂಡ ಸೋಲವು. :)

    ReplyDelete
  4. ತುಂಬಾ ಚೆನ್ನಾಗಿದೆ. ನೆನಪು ಚಂದ್ರನ ಬೆಳದಿಂಗಳಂತೆ ಬರುವುದಿದೆಯಲ್ಲಾ...Nice lines

    ReplyDelete
  5. ಅವತ್ತೇ ಓದಿಬಿಟ್ಟಿದ್ದೆ ಆಫೀಸಿನಲ್ಲಿ.... ಆದರೆ ಅಲ್ಲಿ ಕಮೆ೦ಟು ಹಾಕಲು ಆಗಿರಲಿಲ್ಲ....

    ಕವನ ಇಷ್ಟ ಆಯಿತು....ನಿಮ್ಮ ಪದಕೋಶ ಸ೦ಪದ್ಭರಿತವಾಗಿದೆ :)

    ReplyDelete
  6. ಧನ್ಯವಾದ ಸುಬ್ರಹ್ಮಣ್ಯ ಭಟ್ಟರೇ ಮತ್ತು ಸುಧೇಶ್ ಶೆಟ್ಟರೆ! :)

    ReplyDelete
  7. ಕಾರ್ತೀಕ,
    ಕವನ ಸೊಗಸಾಗಿದೆ. ಸಣ್ಣ ತಪ್ಪೊಂದು ನುಸುಳಿದೆ. ಚಂದ್ರನಿಲ್ಲದ ಚಕೋರನಂತೆ ಎಂದು ಆಗಬೇಕಾಗಿತ್ತು;ಚಾರ್ವಾಕನಂತೆ ಎಂದು ಆಗಿ ಬಿಟ್ಟಿದೆ. ದಯವಿಟ್ಟು ಸರಿಪಡಿಸಿರಿ.

    ReplyDelete
  8. ಒಹ್! ಹೌದಲ್ವಾ.. ಧನ್ಯವಾದಗಳು ಸುನಾಥರೆ! ಹೀಗೇ ತಿದ್ದುತ್ತಿರಿ ನನ್ನಂಥ ಎಳೆಯರನ್ನು :)

    ReplyDelete