ಆಫೀಸಿನಿಂದ ಮನೆಗೆ ಹೊರಟಾಗಲೆಲ್ಲ
ಕಣ್ಣು ತನ್ನಷ್ಟಕ್ಕೆ ತಾನೇ ಈಕೆಯ ನೋಡುತ್ತಿತ್ತು..
ಏನಾಶ್ಚರ್ಯ ಇವತ್ತು?
ಈಗ್ಗೆ ಮೊನ್ನೆ ಮೊನ್ನೆಯವರೆಗೂ ಖಾಲಿ ಹಣೆಯ ವಿಧವೆ!
ನೆನ್ನೆಯಿಂದೀಚೆಗೆ ನವ ವಧುವಿನಂದ..
ಈ ಮಲ್ಲಿಕೆಗೆ ಏಕೆ ಹೀಗೆ ಎಂದು ಅರ್ಥವಾಗದು.
ಕೆದರಿದ ಕೂದಲಂತಿದ್ದ ಗಿಡಗಂಟೆಗಳ ಕಿತ್ತು
ಸುಕ್ಕುಗಟ್ಟಿದ ಚರ್ಮಕ್ಕೆ ಬಣ್ಣ ಬಳಿಸಿ..
ಒಡೆದ ಹಿಮ್ಮಡಿಗೆ ಹೊಸದೊಂದು ಪದರ ಹಾಸಿ..
ಉದುರಿದ್ದ ಹಲ್ಪಂಕ್ತಿಯ ಜಾಗದಿ ಹೊಸ ಬಾಗಿಲ ಕೂಡಿಸಿ..
ವರುಷಗಳ ಕೊಳೆಯ ನಿಮಿಷಗಳಲಿ ತೊಳೆದು,
ಸಿಂಗರಿಸಿ ಸಿರಿಕಳೆಯಲಿ ಸಿಗ್ಗಿನಿಂದಲಿ ಬೀಗುತಿರುವಳು.
ಎಷ್ಟೆಂದರೂ ಖಾಲಿ ಜಾಗದ ಒಡತಿ..
ಬಿಡುವರೇ ಮಂದಿ ಖಾಲಿ ಜಾಗವನ್ನು..ಅದರ ಒಡತಿಯನ್ನೂ?
ಬಡಿದು ಬಲೆಗೆ ಹಾಕಿರುವರು ಅವಳನು..
ಇನ್ನಾಕೆ ತುಂಬು ಮನೆಯ ಗೃಹಿಣಿ..
ಇವಳೇ ಮಿಲ್ಲರ್ಸ್ ರೋಡ್ ಮಲ್ಲಿಕಾ..
(ನಗರದ ಮಿಲ್ಲರ್ಸ್ ರಸ್ತೆಯಲ್ಲಿರುವ "ಸಂಖ್ಯೆ ೭. - ಮಲ್ಲಿಕಾ, ಮಿಲ್ಲರ್ಸ್ ರೋಡ್" ಎಂಬ ಕಟ್ಟಡದ ಮೇಲೆ ಈ ಕವನ. ಕೊಂಚ ಹಾಳಾದಂತಿದ್ದ ಇದಕ್ಕೆ ಹೊಸ ರೂಪ ನೀಡಿ ಕಛೇರಿಯೊಂದು ಪ್ರಾರಂಭವಾಗಿದೆ.)
Wow!
ReplyDeleteಇದು ಒಳ್ಳೆಯ talent !. ಒಂದು ಕಟ್ಟಡಾವೂ ನಿಮಗೆ ಸ್ಪೂರ್ತಿಯಾಗಿದ್ದು ಮತ್ತು ಅದರ ಮೇಲೊಂದು ಕವನ ಹುಟ್ಟಿದ್ದು...super.
ReplyDeletenice! :) perspective chenaagide
ReplyDelete