Monday, January 18, 2010

ನೆರಳು, ಪಾಠ ಎರಡೂ ಇಲ್ಲ

ಜನವರಿ ೧೮, ೨೦೧೦ ಎಂಬಲ್ಲಿಗೆ ಕರಗನಹಳ್ಳಿ ಸುಬ್ಬರಾವ್ ಅಶ್ವತ್ಥನಾರಾಯಣ  ಹೆಸರಿನ "ಸಾಮಾನ್ಯ ಮನುಷ್ಯ" ಒಬ್ಬರು ಇಹಲೋಕ ತ್ಯಜಿಸಿದರು. ಹೌದು, ಅವರನ್ನು ಕಣ್ಣಾರೆ ಕಂಡವರು ಹೇಳುವ ಮಾತು  - "ಅವರು ಎಲ್ಲರಂತೆ ಸಾಮಾನ್ಯ ಮನುಷ್ಯರಾಗಿದ್ದರು." ಮೈಸೂರಿನ, ಸರಸ್ವತಿಪುರಂ ನಾಲ್ಕನೇ ಮುಖ್ಯ ರಸ್ತೆಯ ಮನೆ "ಕಲಾಶ್ರೀ". ಬಾಗಿಲು ತೆಗೆದಿದ್ದರೆ ಅದರ ಮೂಲಕ ನಮಗೆ ಕಾಣುತ್ತಿದ್ದುದೆ ಅವರು! ಸಿಂಹನಂತೆ ಗತ್ತಿನಿಂದ ಕುಳಿತಿರುತ್ತಿದ್ದರು. ಸಂಜೆ ಐದು -ಐದೂ ಒರೆಯ ಹೊತ್ತಿಗೆ ಸರಸ್ವತಿಪುರಂನ ಜವರೇಗೌಡ ಉದ್ಯಾನವನ ಅವರ ಸ್ಥಳ! ಪ್ರತಿನಿತ್ಯ ಕಚೇರಿಗೆ ಹೋಗುವವರಿಗಿಂತಲೂ ಹೆಚ್ಚಿನ ಸಮಯಪ್ರಜ್ಞೆ ಮತ್ತು ಡ್ರೆಸ್ಸಿಂಗ್ ಸೆನ್ಸ್. ತಲೆಯೆತ್ತಿ ನಡೆಯುವ ಆ ಭಂಗಿಯನ್ನು ನೋಡುವುದೇ ನಮಗೆಲ್ಲ ಒಂದು ರೀತಿ ಕುತೂಹಲ. ಕೈಯಲ್ಲಿ ಒಂದು ಕೋಲು. "ನಮಸ್ಕಾರ ಅಶ್ವತ್ಥ್ ಅವರೇ " ಎಂದವರಿಗೆ "ನಮಸ್ಕಾರ ನಮಸ್ಕಾರ" ಎಂಬ ಮಂದಹಾಸ ಕೂಡಿದ ಉತ್ತರ.


ದೇವರಿಗೆ ಒಳ್ಳೆಯವರನ್ನು ಕಂಡರೆ ಇಷ್ಟ ಎನ್ನುವ ಮಾತು ಮತ್ತೊಮ್ಮೆ ಸಾಬೀತಾಗಿದೆ. ಎಲ್ಲರೊಳಗೆ ಒಬ್ಬರಾಗಿದ್ದ, ಚಿತ್ರರಂಗವೇ ತಮ್ಮ ಮನೆ ಎಂದುಕೊಂಡಿದ್ದ ನಿಷ್ಠಾವಂತ, ಸಹೃದಯಿ ಮತ್ತು ಸಾಮಾನ್ಯ ಮನುಷ್ಯರೊಬ್ಬರನ್ನು ಕಳೆದುಕೊಂಡಿದ್ದೇವೆ. ದುಃಖ ಪಡುವುದರ ಬದಲಾಗಿ ಹೆಮ್ಮೆ ಪಡೋಣ. ಅವರಂತೆ ಎಲ್ಲರೂ ಒಳ್ಳೆಯವರಗಲಿ ಎಂದು ಆಶಿಸೋಣ. ಅಶ್ವತ್ಥ ವೃಕ್ಷದ ನೆರಳೂ ಇಲ್ಲ, ಚಾಮಯ್ಯ ಮೇಷ್ಟ್ರ ಪಾಠವೂ ಇನ್ನು ಮುಂದೆ ಇರೋದಿಲ್ಲ. ಹಿಂದಿನದನ್ನೇ ರಿವೈಂಡ್ ಮಾಡಿ ನೋಡ್ಕೊತಿರ್ಬೇಕು. ನಮ್ಮ ಚಿತ್ರ ರಂಗ, 'ರಮ್ಯ'ವಾಗಿರುವ ಅಸಹ್ಯಗಳನ್ನು ಬದಿಗೊತ್ತಿ ನಿಜವಾದ ಪ್ರತಿಭೆಗಳೆಡೆಗೆ ಗಮನ ಹರಿಸಲಿ. ಅಟ್ ಲೀಸ್ಟ್, ಇಂಥವರ ಬಗ್ಗೆ ಒಮ್ಮೆಯಾದರೂ ಯೋಚನೆ ಮಾಡಲಿ. ಹಾಗೆ ಮಾಡುತ್ತಾರೆಂದು ಆಶಿಸುತ್ತ..

ಮತ್ತೆ ಬರುವೆ.

4 comments:

  1. ಅಶ್ವಥ್ ಮುಖವೇ ಆಹ್ಲಾ ನೀಡುವಂಥದ್ದು ಅಲ್ಲವೇ

    ReplyDelete
  2. ಮತ್ತೊಬ್ಬ ಮಹಾನ್ ಕಲಾವಿದ ನಮ್ಮ ಜೊತೇಲೆ ಸಾಮಾನ್ಯವಾಗಿ ಇದ್ದು ಅಸಮಾನ್ಯನಾಗಿ ಹೋದ ಕತೆ. ಚಿರಾಯುವಾಗಲಿ ಅಶ್ವಥ್.

    ReplyDelete
  3. ತೀರಾ ಹತ್ತಿರದಲ್ಲೇ ಅಶ್ವಥ್ ಎ೦ಬ ಇಬ್ಬರು ಪ್ರತಿಭೆಗಳು ಮರೆಯಾಗಿದ್ದು ತು೦ಬಲಾಗದ ನಷ್ಟ :(

    ReplyDelete
  4. ಕಾರ್ತಿಕ್, ಅಶ್ವಥ್ ಎಷ್ಟು ಚೊಕ್ಕ ಅಭಿನಯದ ಪ್ರತೀಕವೋ ಅಷ್ಟೇ ಅನುಕರಣೀಯ ಶಿಸ್ತಿನ ನಡವಳಿಕೆಯವರು. ಅವರ ನಿರ್ಗಮನದಿಂದ ಚಿತ್ರರಂಗಕ್ಕೆ ಮತ್ತೊಂದು ಪೆಟ್ಟು

    ReplyDelete