Saturday, January 30, 2010

ಬಾಲ ವಿಧವೆಯ ಮನದ ಮಜಲುಗಳು

ಮರದ ಮೇಲೆ, ಮರಳ ಗೂಡೊಳಗೆ
ಕುಣಿ ಕುಣಿದು, ದಣಿ ದಣಿದು
ಕಾಲು ನೋಯುವ ಮುನ್ನವೇ,
ಭಾರವಾಯಿತೆನ್ನ ಕುತ್ತಿಗೆ!

ಅಂಬುಧಿಯಾಚೆಗಿನ ಕನಸು,
ಹೊಸ್ತಿಲನ್ನೂ ದಾಟಬಿಡದ ವಾಸ್ತವ!
ನನ್ನ ಕನಸುಗಳ ನಾಶಗೈದ
ವಾಸ್ತವವ ಕ್ಷಮಿಸುವುಸು ಹೇಗೆ?

ಮಧುರಾರ್ಣವದೊಳು ಮಿಂದೆದ್ದ ಮನುಷ್ಯ
ತಾ ಮಧುಮೇಹಿಯಾಗುವನೇ?
ನಿನ್ನಿಷ್ಟದಂತೆ ನಡೆದ ನನಗೆ
ಮಾಯಾಂಗನೆಯ ಪಟ್ಟವೇಕೆ?

ನಿನ್ನ ಬಾಳ ಯಾಗಕ್ಕೆ
ನನ್ನ ಕನಸುಗಳನ್ನೇ ಸಮಿತ್ತುಗಳ ಮಾಡಿದ್ದೆ!
ನಿನ್ನ ಶೃತಿಗೆ ಹಿರಿ ಹಿರಿ ಹಿಗ್ಗಿದ್ದ ನನ್ನನ್ನು
ಕುಗ್ಗಿಸಿ ಹೋದದ್ದು ತರವೇ?

ಈಗ ನನ್ನ ಖಾಲಿ ಹಣೆ, ಹೂ ಕಾಣದ ಮುಡಿಯ ಕಂಡು
ಮರುಗುವರು ಮಂದಿ..
ಆಗೆಲ್ಲಿ ಹೋಗಿತ್ತು ಅವರ ಬುದ್ಧಿ??
ಆದರೂ, ಅಷ್ಟಾದರೂ..
ನನ್ನ- ನಿನ್ನ ಬೆಸುಗೆಯ ಬಲ್ಲರೇನವರು?

3 comments:

  1. ಹಳೆಗನ್ನಡ ಹೊಸಗನ್ನಡಗಳ ಮಿಶ್ರಣವಾಗಿರುವ ಕವಿತೆಯ ಶೈಲಿ ಮತ್ತು ವಸ್ತು ಚೆನ್ನಾಗಿದೆ :)

    ReplyDelete
  2. baalavidhaveya oDala bEgudiya tereditta hrdayasparshi kavana...:)...

    ReplyDelete