ಮಧುಮಾಧವನಿಗೆ ಮದುವೆ!
ವಿರಹಿ ರಾಧೆ ತಾ ವಧುವೇ??
ಇನ್ನೆಷ್ಟು ಯುಗ ವಿರಹಿಯಾಗಿರ್ಪುದು ತರ ರಾಧೆ?
ವಧುವಾಗುವಳೇ ದೇವಕೀಸುತ ಕಂಸಾರಿಗೆ?
ವಧುವಾಗುವಳೇ ಯಶೋದಾತನಯ ಪೂತನ್ಯಂತಕನಿಗೆ?
ವಧುವಾಗುವಳೇ ಕಿರುಬೆರಳ ತುದಿಯಲಿ ಬೆಟ್ಟವ ಪಿಡಿದವಗೆ?
ವಧುವಾಗುವಳೇ ಆಬಾಲ್ಯ ಅನುಗಾಲ ಬಳಿಯಿದ್ದವಗೆ..?
ವಧುವಾಗುವಳೇ ಮೂಲೋಕವೂ ಕಾಣಲು ಹಾತೊರೆಯುವಂಥವಗೆ?
ಇಲ್ಲವೇ..
.
.
.
.
ವಧುವಾಗುವಳೇ ವಿವಾಹ ವೇದಿಕೆಗೆ ನುಗ್ಗಿ ,
ಮದುಮಗಳ ಸೆಳೆದೆಳೆದ ಅಪಹರಣಕಾರನಿಗೆ?
ವಧುವಾಗುವಳೇ ಶಮಂತಕದಾಸೆಗೆ
ಪ್ರಾಣಿಯ ಮಗಳ ಪಾಣಿಗ್ರಹಣ ಮಾಡಿದವಗೆ?
ವಧುವಾಗುವಳೇ ಅಸುರನಡಗಿಸಿ ಗೆಲಿದ
ಸಹಸ್ರ ಸಹಸ್ರ ಸ್ತ್ರೀಯರ ಹೃಚ್ಚೋರನಿಗೆ?
ವಧುವಾಗುವಳೇ ಮೋಹದಿಂ ಸತ್ಯಭಾಮೆಯ ವರಿಸಿದವಗೆ?
ವಧುವಾಗುವಳೇ ಗೋಪಾಂಗನೆಯರ ಅಂಗವಸ್ತ್ರಗಳ ಅಡಗಿಸಿದವಗೆ?
ವಧುವಾಗುವಳೇ ಮಾಯೆಯಿಂ ಊರುಭಂಗವಗೈಸಿ
ಕುರುಜ್ಯೇಷ್ಠನಂ ಕೊಂದವಗೆ?
ವಧುವಾಗುವಳೇ ತನ್ನ ಮರೆತು
ಸ್ವಹಿತ ಸಾಧಿಸಿದ "ಸರ್ವೋತ್ತಮ"ನಿಗೆ?
ಇಷ್ಟಕ್ಕೂ ರಾಧೆ ಇಂಥವನಿಗೆ ವಧುವಾಗುವುದು ವರವೇ? ತರವೇ? ಧರ್ಮವೇ?
ಲೋಕದ ಉತ್ಕರ್ಷಕ್ಕೋಸುಗ ಲೀಲೆಯಿಂ ದುಷ್ಟಮರ್ದನಗೈದು ಶಿಷ್ಟರಂ ಪಾಲಿಸಿದ ಸ್ಮೇರಾನನನಿಗೆ ವಧುವಾಗದೆ ಅಭಾಗಿನಿಯಾಗಲು ಬಯಸುವಳೇ ರಾಧೆ...?.. ಅವಳು ಆ ವರಗೆ ವಧುವಾಗುವುದು ಘನತರದ ಧರ್ಮವಹುದು...
ReplyDelete...ಸುಂದರ ಕವಿತೆ. :)
ReplyDeleteಕವನದ ಮೊದಲ ಭಾಗದ ಬಾಲಗೋಪಾಲ ಅವಳನ್ನು ತೊರೆದೇ ಹೋದ. ಎರಡನೆಯ ಭಾಗದ
ReplyDeleteಧೀರನಂತೂ ಸ್ವಂತ ರಾಜಕೀಯದಲ್ಲಿ ಮುಳುಗಿದವ! ರಾಧೆಯ ಪಾಡನ್ನು ಸುಂದರವಾಗಿ ಚಿತ್ರಿಸಿದ್ದೀರಿ.
ಬಹಳ ಅರ್ಥಪೂರ್ಣ ಕವಿತೆ...:)
ReplyDeleteThumba chennagidhe kavana kaarthik.... ishta aayithu... visheshavaagi kavanadha bhaashe :)
ReplyDeleteYeno putta! paththEnE illa :)
ReplyDelete