Tuesday, June 1, 2010

ಅರಿಕೆ!

ಆಹ್! ಪರೀಕ್ಷೆಗಳು, ಪ್ರಾಜೆಕ್ಟ್ ಕೆಲಸ, ಸೆಮಿನಾರು, ನೋಟ್ಸ್ ಹೊಂದಿಸಿಕೊಳ್ಳೋ ಗಡಿಬಿಡಿಯೊಳಗೆ ಇತ್ತ ಬರಲೇ ಆಗಲಿಲ್ಲ. ನಾಳೆ ಒಂದು ಪರೀಕ್ಷೆ ಇದೆ! ಕೊನೆಯದ್ದು. ಮುಗಿದರೆ ನನ್ನ ಇಂಜಿನಿಯರಿಂಗ್ ಮುಗಿದ್ಹಂಗೆ ಲೆಕ್ಕ! ನೀವೇ ಹೇಳಿ, ಒಂದೇ ಸಲಕ್ಕೆ ಎಷ್ಟು ಅಂತ ಓದೋದಕ್ಕೆ ಆಗತ್ತೆ? ಮಧ್ಯ ಮಧ್ಯ ಏನಾದರೂ ಟೈಮ್ ಪಾಸ್ ಮಾಡ್ಬೇಕಲ್ವೆ? ಕಳೆದ ಪರೀಕ್ಷೆಗೆ ಓದಿ ಓದಿ ತಲೆ ಗಿರಕಿ ಹೊಡ್ಯೋಕೆ ಶುರುವಾದಾಗ, ಕೈಲಿದ್ದ ಪೆನ್ನು ಪೇಪರ್ ತಗಂಡು ಈ ಪದ್ಯ ಗೀಚಿದೆ. ನನಗಂತೂ ಇಷ್ಟ ಆಗ್ಹೋಯ್ತು..ನಿಮ್ಗೆ ಏನನ್ಸುತ್ತೋ ...ಓದಿ ಹೇಳಿ :)

ಎದುರು ಬಂದ ಹೆಣ್ಣಿಗೆ
ಎದೆಯ ಕದ ದೂಡುವ ತವಕವಿಲ್ಲ..
ಬಾಗಿಲು ಬಡಿವ ಸದ್ದು ಕೇಳಿ 
ಹುಚ್ಚೆದ್ದು ಕುಣಿವ ಮನಕೆ ಪುಳಕವಿಲ್ಲ!

ತ್ವರಿತ ಹರಿತ ನಯನ ಶರವು
ನಾಟೆ ಘಾಸಿ ಪುಟ್ಟ ಎದೆಯು
ಚತುರ ಹಸಿತ ಕೇಳಿ ಕರ್ಣ
ಕೇಳದೆನ್ನ ಮಾತೆ ಇನ್ನ..

ಮಲೆಯ ಸೊಬಗ ಕಟಿಯು ಅದುವೆ 
ನದಿಯ ತೆರದಿ ಬಳಸುವಾಸೆ ಎನಗೆ..
ಅಶ್ಮ ವೃಕ್ಷ ಹೊಯ್ಗೆಯೆಲ್ಲ ತೊಯ್ದು
ಕಲಿವೆ ಹರಿತವಂಚ ಮೃದುವಾಗಿಸುವ ಬಗೆ!

ಎಷ್ಟು ದರ್ಪವಿದ್ದರೇನು ...
ಸುತ್ತುತಿಹುದು ಕಿರುಬೆರಳು ಸೆರಗ..
ಕೆರೆಯುತಿಹುದು ಕಾಲ್ಬೆರಳು ನೆಲವ..
ಮನ ನುಡಿಯುತಿಹುದು..
ಆ ನೆಲವೇ ನನ್ನೆದೆಯ ಕದವಾಗಬಾರದೇ?



10 comments:

  1. ಪರೀಕ್ಷೆ ಸಮಯದಲ್ಲಿ ಇಂತ ಪದ್ಯ ಎಲ್ಲ ಅರ್ಥ ಆಗಲ್ಲ.ಎಲ್ಲ exam ಮುಗಿಸಿದ್ಮೇಲೆ ಸರಿಯಾಗಿ ಓದಿ ಅರ್ಥ ಆಗುತ್ತಾ ಅಂತ ನೋಡ್ತೀನಿ. Ok na?

    ReplyDelete
  2. ಪದ್ಯ ಚೆನ್ನಾಗಿದೆ. ಹಾಗಂತ ಕೊನೆಯ ಪೇಪರಿನಲ್ಲಿ ಇದನ್ನೇ ಬರೆಯೋಕೆ ಹೋಗಬೇಡಿ!

    ReplyDelete
  3. @ ಯದು! ಖಂಡಿತ ಓದಪ್ಪ :)
    @ ಸುನಾಥ್! ಧನ್ಯವಾದಗಳು..ಪದ್ಯ ಓದಿದ್ದಕ್ಕೂ, ನನಗೆ ಸಲಹೆ ನೀಡಿದ್ದಕ್ಕೂ! :)

    ReplyDelete
  4. ಇರಲಿ...change is good !. ಸ್ವಲ್ಪ ರಿಲ್ಯಾಕ್ಸ್ ಆಗುತ್ತಲ್ವಾ. ಚೆನ್ನಾಗಿದೆ.

    ReplyDelete
  5. ಕವನ ಚನ್ನಾಗಿದೆ ಕಾರ್ತಿಕ್, ಪರೀಕ್ಷೆಯೂ ಚನ್ನಾಗಿ ಆಗಿದೆ ಎಂದುಕೊಳ್ಳುತ್ತೇನೆ.. :)

    ReplyDelete
  6. 'ಮಲೆಯ ಸೊಬಗ ಕಟಿಯು ಅದುವೆ '...
    'ಎಷ್ಟು ದರ್ಪವಿದ್ದರೇನು ...
    ಸುತ್ತುತಿಹುದು ಕಿರುಬೆರಳು ಸೆರಗ.....'

    -Classique 'Shringaara' Rasa.

    ReplyDelete
  7. @ sharacchandra - thanku and exam went up good :)
    @ Aneesh - Thanks kano! :)

    ReplyDelete
  8. ನಿಮ್ಮ ಫೋಟೋಗಳು ತುಂಬಾ ಇಷ್ಟವಾಯ್ತು.ಮತ್ತೆ ಮತ್ತೆ ನೋಡುವಂತೆ, ಎತ್ತಿಟ್ಟುಕೊಳ್ಳುವಷ್ಟು.

    ReplyDelete