ಜಿನುಗುನುಗುತಿದೆ ಆಷಾಢದ ಮಳೆಯು..
ಮೆಲ್ಲ ನಗುತಿಹುದು ಹೂ-ಪಕಳೆಯು!
ಮೇಘರಾಜ ಮರೆಮಾಚಿ ನೇಸರನ
ಆಡುತಿಹನಾಟ ಬಾನಂಗಳದಲಿ..
ವರುಣ ತಾ ಭೂರಮೆಯ ತಣಿಸುತಿಹ
ಅಮರ ಪ್ರೇಮಿಯು ತಾ ನಾಚುವೆನಿತು!
ಧರಣಿಕುಲೆ ಹೂ ಮುಡಿದು ನಲಿದಿಹಳು
ಪ್ರಿಯನ ಅಮೃತಧಾರೆಯ ಮೆಲ್ಲ ಹೀರಿಹಳು!
ಅಲ್ಪ ಮನುಜಮತಿಯ ತೋರಿಸುತ್ತ..
ಸುತ್ತುವರಿದರೂ ಸದಾ ಪ್ರಿಯೆಯ ಸುತ್ತ,
ನೀಡಬಲ್ಲನೆ ಸಖನು ಇಂತಿಪ್ಪ ಮಳೆ-ಭುವಿಯ ತೆರದಿ ಸವಿಯಾದ ಮುತ್ತ?
ಓಹ್ !. ಇದು ಸರಿಯಾದ ತುಲನೆ. ಯಾವ ಸಖ ತಾನೆ ನೀಡಬಲ್ಲ ಸ್ವಾಮಿ ಅಂತಹ ಮುತ್ತನ್ನು !!?
ReplyDeleteತು೦ಬಾ ಚನ್ನಾಗಿದೆ ಹೋಲಿಕೆ...
ReplyDeleteಮನಸ್ಸಿಗೆ ಮುದ ನೀಡುವ ಕಾವ್ಯವರ್ಷೆ.
ReplyDeleteಸು೦ದರ ಕವನ..
ReplyDelete