ನೆರಳನೋಡಿಸಲು ದೀಪ ನಂದಿಸಬೇಕು!
ಇದ್ದರಿತ್ತು ನೆರಳು..ಜೊತೆಯಾಗಿ ಒಂಟಿತನಕೆ.
ನಿಟ್ಟುಸಿರ ರಭಸಕೆ ದೀಪದುರಿ ನಲಿಯದಿರೆ
ನೆರಳು ಮಾತನಾಡುವುದೆನಿತು?
ಬೆಳಕಿಗಿಂತ ಕತ್ತಲೆಯೇ ಚೆನ್ನ
ನಾನು ಮತ್ತು ನನ್ನ ನೆರಳು!
ಬೆಳಕು ಹೊಮ್ಮಿದರೆ ತಿಮಿರವದು ತಿಳಿಯದು.
ಒಂದೇ ಒಂದು ದೀಪದ ಬುಡ್ಡಿ..ಇಲ್ಲವೇ..
ಸಣ್ಣದೊಂದು ಕಂದೀಲಾದರೂ ಸಾಕು.
ಹೆಚ್ಚು ಬೆಳಕಿದ್ದರೆ ನೆರಳ ಹುಡುಕುವುದು ತುಸು ಕಷ್ಟ!
ಒಂದೊಳ್ಳೆಯ, passionate ಆಗಿ ಬರೆದಿರುವ ಕವನ. ಚೆನ್ನಾಗಿದೆ.
ReplyDeleteGood one! You must collect all your poems and publish them as a book soon.
ReplyDelete