Monday, July 22, 2013

ಜಾವಳಿ

ಕರ್ನಾಟಕ ಶಾಸ್ತ್ರೀಯ ಸಂಗೀತ ಶೈಲಿಯ ಒಂದು ರೀತಿಯ ಹಾಡಿನ ಪ್ರಕಾರವಾದ ಜಾವಳಿಗಳ ಮೇಲಿನ ಒಲುಮೆಯಿಂದ ಅದೇ ರೀತಿ ಒಂದು ಜಾವಳಿ ಬರೆದಿದ್ದೇನೆ.. ಈ ಹಿಂದೆ ಬರೆದಿದ್ದ "ನಿವೇದನೆ" ಕೂಡ ಜಾವಳಿಯೇ ! ಅದನ್ನು "ಬೇಹಾಗ್" ರಾಗಕ್ಕೆ ಮತ್ತು "ಮಧುವನ್ತೀ" ರಾಗಕ್ಕೆ ಇಬ್ಬರು 'ದೋಸ್ತಾರು ' ಒಗ್ಗಿಸಿಕೊಟ್ಟಿದ್ದಾರೆ ಕೂಡ.. ಅವರಿಗೆ ಮನತುಂಬು ಧನ್ಯವಾದಗಾಳನ್ನು ಹೇಳುತ್ತಾ ಈ ಹೊಸ ಜಾವಳಿ ನಿಮ್ಮ ಮುಂದೆ!

ಏನೆಂದು ಬಣ್ಣಿಸಲಿ, ಅಂದವ
ಅವಳಂತರಂಗದ ಚೆಂದವ, ದೇವಾ!

ಮೋಹದಂಬುಧಿಯಲಿ
ಮಿಂದು ಬಂದಿಹ ಕಾಂತೆಯ..(ಏನೆಂದು)

ನಿಂದೆಗೆ ಪದವಿರದ
ಸಂದೇಹಕೆಡೆಯಿರದ..ಒಲವ (ಏನೆಂದು)

ಮನದ ಸಂದುಗಳೊಳಗೆ
ನಲ್ಲೆಯ ಸಂಧಿಸಿದೆನೆಲ್ಲೆಂದು..(ಹೇಗೆ ಬಣ್ಣಿಸಲಿ...)

5 comments:

  1. ಸಂಗೀತದಲ್ಲಿ ನಾನು ಅಜ್ಞ. ಆದರೆ ನಿಮ್ಮ ಕವನ ಹಿಡಿಸಿತು.

    ReplyDelete
  2. ಸುನಾಥರೇ! ತುಂಬಾ ಧನ್ಯವಾದಗಳು. ಈ ಜಾವಳಿಗಳ ಮೂಲ ಕನ್ನಡ ಸಾಹಿತ್ಯವೇ ಅನ್ನೋದು ಕುತೂಹಲಕರ ಸಂಗತಿ. ಜಾವಳಿ ಪದದ ಮೂಲವೂ ಕನ್ನಡವೇ. ಮೊದಮೊದಲ ಜಾವಳಿಗಳನ್ನು ರಚಿಸಿದವರು ಮೈಸೂರು ಅರಸರ ಆಶ್ರಯದಲ್ಲಿದ್ದ ಈಗಿನ ನಂಜನಗೂಡಿನ ಬಳಿಯ ಹುಲ್ಲಹಳ್ಳಿಯ ವಾಗ್ಗೇಯಕಾರರು. ಇಲ್ಲಿ ಟಂಕಿಸಿರೋ ಜಾವಳಿ "ಮಾತಾಡಬಾರದೇನೋ.." ಕೂಡ ಅವರದ್ದೇ!

    ReplyDelete
  3. ಒಳ್ಳೆ ಕವಿತೆ ಮಾತು ಮಾಹಿತಿ.

    ReplyDelete
  4. ನಿಮ್ಮ ಜಾವಳಿ ತುಂಬ ಇಷ್ಟವಾಯಿತು.

    ReplyDelete
  5. ಜಾವಳಿ ಚೆನ್ನಾಗಿದೆ :)

    ReplyDelete