ಸತ್ತ ಆ ಪಾದಪದ
ತುತ್ತ ತುದಿಯೊಳಗಿರುವ |
ಕಡ್ಡಿಗಳ ಮೆತ್ತನೆಯ
ಗೂಡಿನೊಳಗಿಂದ ||
ಹಸಿವೆಯಿಂ ಬಳಲುತ್ತ
ಬಿಸಿಲಿನಿಂ ಕಂಗೆಡುತ
ಚಿತ್ತದಲಿ ಮತ್ತನೇ-
-ರಿಸುವ ಆ ಖಗದ..
ತತ್ತಿಯೊಳಗಿಂದ ತಾ
ಕತ್ತ ಹೊರ ಹಾಕುತ್ತ
ಅತ್ತಿತ್ತ ತಿರುಗಿ ಕೈ
ತುತ್ತ ನೀಡೆನಲು
ಅತ್ತಿತ್ತ ಅಲೆದಲೆದು
ಹತ್ತು ಕಡೆಗಳ ಸುತ್ತಿ
ತಾ ಹೆತ್ತ ಕರುಳ ಬ-
ಳ್ಳಿಗೆ ತುತ್ತನಿಡುತ
ತನ್ನೆರಕೆಯೋಸರಿಸಿ
ನೆಳಲಾಸಗೈಯುತ್ತ
ನಿಜ ಬದುಕ ತೇವ ತಾ-
-ಯಿಯನು ತಾ ತೊರೆದು
ಬಲಿತ ಆ ಯುವ ಖಚರ
ಹೆತ್ತ ಹೃತ್ ಸೀಳುತಲಿ
ಕಾವಿತ್ತ ಕಾಯವನು
ತ್ಯಜಿಸಿ ತೆರಳುತಿದೆ...!
( ನಲ್ಮೆಯ ಅಜಯ ಕೃಷ್ಣನಿಗೆ ಧನ್ಯವಾದಗಳು)
Endinanthe vishishtavaagidhe kavana..... E kavanadha shailige yenaadaroo hesarideya... yaakendare "ಮತ್ತನೇರಿಸುವ" padhavannu thundarisi yeradu saalugaLalli hanchiruveyalla adhakke kELiddu!
ReplyDeleteಹಸಿವೆಯಿಂ ಬಳಲುತ್ತ
ಬಿಸಿಲಿನಿಂ ಕಂಗೆಡುತ
ಚಿತ್ತದಲಿ ಮತ್ತನೇ-
-ರಿಸುವ ಆ ಖಗದ..
ತತ್ತಿಯೊಳಗಿಂದ ತಾ
ಕತ್ತ ಹೊರ ಹಾಕುತ್ತ
ಅತ್ತಿತ್ತ ತಿರುಗಿ ಕೈ
ತುತ್ತ ನೀಡೆನಲು
Ajaya Krishnanige yaake thanks? :)