Thursday, September 23, 2010

ಕೃತಜ್ಞ(ಘ್ನ)

ಸತ್ತ ಆ ಪಾದಪದ
ತುತ್ತ ತುದಿಯೊಳಗಿರುವ |
ಕಡ್ಡಿಗಳ ಮೆತ್ತನೆಯ
ಗೂಡಿನೊಳಗಿಂದ ||

ಹಸಿವೆಯಿಂ ಬಳಲುತ್ತ
ಬಿಸಿಲಿನಿಂ ಕಂಗೆಡುತ
ಚಿತ್ತದಲಿ ಮತ್ತನೇ-
-ರಿಸುವ ಆ ಖಗದ..
ತತ್ತಿಯೊಳಗಿಂದ ತಾ
ಕತ್ತ ಹೊರ ಹಾಕುತ್ತ
ಅತ್ತಿತ್ತ ತಿರುಗಿ ಕೈ
ತುತ್ತ ನೀಡೆನಲು

ಅತ್ತಿತ್ತ ಅಲೆದಲೆದು
ಹತ್ತು ಕಡೆಗಳ ಸುತ್ತಿ
ತಾ ಹೆತ್ತ ಕರುಳ ಬ-
ಳ್ಳಿಗೆ ತುತ್ತನಿಡುತ

ತನ್ನೆರಕೆಯೋಸರಿಸಿ
ನೆಳಲಾಸಗೈಯುತ್ತ
ನಿಜ ಬದುಕ ತೇವ ತಾ-
-ಯಿಯನು ತಾ ತೊರೆದು
ಬಲಿತ ಆ ಯುವ ಖಚರ
ಹೆತ್ತ ಹೃತ್ ಸೀಳುತಲಿ
ಕಾವಿತ್ತ ಕಾಯವನು
ತ್ಯಜಿಸಿ ತೆರಳುತಿದೆ...!



( ನಲ್ಮೆಯ ಅಜಯ ಕೃಷ್ಣನಿಗೆ ಧನ್ಯವಾದಗಳು)

1 comment:

  1. Endinanthe vishishtavaagidhe kavana..... E kavanadha shailige yenaadaroo hesarideya... yaakendare "ಮತ್ತನೇರಿಸುವ" padhavannu thundarisi yeradu saalugaLalli hanchiruveyalla adhakke kELiddu!

    ಹಸಿವೆಯಿಂ ಬಳಲುತ್ತ
    ಬಿಸಿಲಿನಿಂ ಕಂಗೆಡುತ
    ಚಿತ್ತದಲಿ ಮತ್ತನೇ-
    -ರಿಸುವ ಆ ಖಗದ..
    ತತ್ತಿಯೊಳಗಿಂದ ತಾ
    ಕತ್ತ ಹೊರ ಹಾಕುತ್ತ
    ಅತ್ತಿತ್ತ ತಿರುಗಿ ಕೈ
    ತುತ್ತ ನೀಡೆನಲು

    Ajaya Krishnanige yaake thanks? :)

    ReplyDelete